Thursday, June 25, 2009

ಚಂಚಲತೆ


ಅರಿವಾಯಿತು ಈ ಸತ್ಯ ನನಗಂದು,
ಅದೆಷ್ಟು ಚಂಚಲವು ಮನಸ್ಸೆಂದು.
ಸೆಳೆಯಿತು ಈ ಕ್ಷಣ, ಆ ಮಾಯಾ ಜಿಂಕೆಯ ಆಕರ್ಷಣ,
ಕಂಡು ಮರಣವ ಒಂದು, ತುಡಿಯಿತು ಮನವು ಮರು ಕ್ಷಣ.

ಕಿರು ಹೆಜ್ಜೆಗಳ ಹಾಕುತ್ತಾ, ಸಾಗಿ ಬಂದೆ ಬಾಳ ಪಥದಿ,
ದಾಟುತ್ತಾ, ನೂರೆಂಟು ಕವಲುದಾರಿಗಳ - ಪ್ರತಿ ಹಂತದಿ.

"ಈ ದಾರಿಯೊ, ಆ ದಾರಿಯೊ", ದುಗುಡ, ಸಂಶಯ ಸದಾ,
ಕಳೆದು ನಿಂತ ಮಾರ್ಗವೇ ಉತ್ತಮ, ಎಂಬ ಮನಸ್ಸಿನ ವಿವಾದ.

ಬಲಿಯಾಗದೆ ಭಾವೋದ್ರೇಕದ ಬಿರುಗಾಳಿಗೆ, ಕಾಪಾಡಿಕೊ ನೀನು ನಿನ್ನ,
"ಎಚ್ಚತ್ತು!", ಓ ಮೂಢ ಮನಸ್ಸೆ, ಭಾವನೆಗಳು ಧೃಡವಾಗಿ ಬೇರೂರುವ ಮುನ್ನ.

"ಕತ್ತಲು, ಕತ್ತಲು", ಏತಕೀ ಆರ್ತನಾದ ?
ಅಗೋ ಕಂಡಿತು ಬೆಳಕು - ನಿನ್ನ, ಪರಮಾತ್ಮನ ಸಂವಾದ.

ಅರಿವಾಯಿತು ಈ ಸತ್ಯ ನನಗಂದು,
ಅದೆಷ್ಟು ಚಂಚಲವು ಮನಸ್ಸೆಂದು.
ಆಗಬಾರದೇಕೆ, ಈ ಬದುಕಿನ ಗುರಿ - ಆ ಮನಸ್ಥಿರತೆ ?
ತಿಳಿಗೊಂಡ ಚಂಚಲತೆ, ಅಹುದು - ಅದೆ ಜೀವನದ ಸಾರ್ಥಕತೆ !

[My first attempt at kannada poetry. And, I realized how difficult it is. Please, to pardon any grammatical/'spelling' mistakes :).]

4 comments:

Unknown said...

This is awesome!!!! So much hiddent talent! I didnt even know so many words existed in kannada :P

Krishna said...

Thanks !!!
:).

Josh said...

brillian kris! just brilliant...

Krishna said...

Thanks guru !!